೨೨೦೦ ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಒಬ್ಬ ರಾಜನಿದ್ದನು. ಅವನ ಹೆಸರು ಅಶೋಕ. ಅವನ ರಾಜ್ಯ ಅತಿ ದೊಡ್ಡದು. ದಕ್ಷಿಣದಲ್ಲಿ ಕರ್ನಾಟಕದಿಂದ ಉತ್ತರದಲ್ಲಿ ಇಂದಿನ ಅಫ್ಘಾನಿಸ್ತಾನದ ವರಿಗು.
ಆದರೆ ಕಳಿಂಗ ಎನ್ನುವ ಒಂದು ಸಣ್ಣ ರಾಜ್ಯ ಅವನದಾಗಿರಲಿಲ್ಲ. ಕಳಿಂಗ ಅಂದರೆ ಇಂದಿನ ಒಡಿಶಾ ಎನ್ನಬಹುದು. ಅಶೋಕ ತುಂಬಾ ಕ್ರೂರಿಯಾಗಿದ್ದನು. ಏನಾದರೂ ಮಾಡಿ ಈ ಕಳಿಂಗ ರಾಜ್ಯವನ್ನು ತನ್ನದಾಗಿಸಬೇಕೆಂದು ಅವನು ಅದರಮೇಲೆ ಯುದ್ಧಕ್ಕೆ ಹೋದನು. ಒಂದು ಘೋರ ಯುದ್ಧ ನಡಿಯಿತು. ಕೊನೆಗೂ ಅಶೋಕನು ಕಳಿಂಗ ರಾಜ್ಯವನ್ನು ಗೆದ್ದನು.
ಆದರೆ, ಯುದ್ಧದಲ್ಲಿ ೧೦೦,೦೦೦ ಜನ ಸಾವಿಗೆ ಒಳಗಾದರು. ಎಲ್ಲಿ ನೋಡಿದರೆ ಅಲ್ಲಿ ಶವಗಳು ಕಾಣುತಿತ್ತು. ಇದನ್ನು ನೋಡಿದ ಅಶೋಕನ ಕಲ್ಲಿನ ಹೃದಯ ಕರಗಿತು. ಯುದ್ಧ ಮಾಡಿದಕ್ಕೆ ತುಂಬಾ ಪಶ್ಚಾತಾಪ ಪಟ್ಟನು. ಅವನು ಬೌದ್ಧ ಧರ್ಮವನ್ನು ಸ್ವೀಕರಿಸಿದನು. ಬುದ್ಧನ ಶಾಂತಿಯ ಮಾರ್ಗವನ್ನು ಅನುಸರಿಸಿದನು. ಅಂದಿನಿಂದ ಯುದ್ಧ ಮಾಡಬಾರದೆಂದು ನಿಶ್ಚಯಿಸಿದನು. ಕಳಿಂಗ ಯುದ್ಧವೇ ಅವನ ಜೀವನದ ಕೊನೆಯ ಯುದ್ಧ.
ರಾಜರೆಂದರೆ ಹೇಗೆ ಅಂದರೆ ಒಂದು ಯುದ್ಧ ಗೆದ್ದಮೇಲೆ ತಮ್ಮ ರಾಜ್ಯ ಇನ್ನು ವಿಸ್ತರಿಸಲು ಇನ್ನಷ್ಟು ಯುದ್ಧ ಮಾಡುತಿದ್ದರು. ಇದು ಬರಿ ನಮ್ಮ ದೇಶದ ರಾಜರಲ್ಲ, ಬೇರೆ ದೇಶಗಳ ರಾಜರು ಹೀಗೇ. ಇದು ವರಿಗೂ ಅದೆಷ್ಟು ನೂರು ಸಾವಿರ ರಾಜರು ಜಗತ್ತಿನಲ್ಲಿ ಆಳಿದ್ದಾರೆಯೋ ಅವರೆಲ್ಲರಲ್ಲಿ ಅಶೋಕ ಒಬ್ಬನೇ ಗೆದ್ದ ನಂತರ ಯುದ್ಧ ನಿಲ್ಲಿಸಿ ಶಾಂತಿಯ ಮಾರ್ಗ ಹಿಡಿದಿದ್ದು. ಇದು ಸಾಮಾನ್ಯ ವಿಷಯವಲ್ಲ. ಅದಕ್ಕೆ ಅಶೋಕನನ್ನು ತುಂಬಾ ಸಾಹಿತಿಗಳು ಸರ್ವಶ್ರೇಷ್ಠ ರಾಜನೆಂದಿದ್ದಾರೆ.
ಅಶೋಕ ಅವನ ರಾಜ್ಯದಲ್ಲಿ ಎಲ್ಲಾ ಕಡೆ ಕಂಭಗಳನ್ನು ಸ್ಥಾಪಿಸಿದನು. ಈ ಕಂಭಗಳಲ್ಲಿ ಬುದ್ಧನ ಬೋಧನೆಗಳು ಬರೆದಿದ್ದವು. ಇಂದಿನ ಭಾರತದ ನಾಲ್ಕು ಸಿಂಹಗಳ ರಾಷ್ಟ್ರೀಯ ಚಿಹ್ನೆ ಅಶೋಕನ ಒಂದು ಕಂಭದಿಂದ ತಗೊಂಡಿರುವುದು. ಬುದ್ಧನ ಶಾಂತಿಯ ಸಂದೇಶವನ್ನು ಜನರಿಗೆ ತಲುಪಿಸುವುದೇ ಅವನ ಜೀವನದ ಕೆಲಸ ಆಯಿತು. ದಾರಿಗಳಲ್ಲಿಎರಡೂ ಕಡೆ ಮರ ನೆಡಿಸಿದನು. ಯಾತ್ರಿಗಳಿಗೆ ಇದರಿಂದ ತುಂಬಾ ಅನುಕೂಲ ಆಗುತಿತ್ತು. ಮಾಂಸಾಹಾರ ಬಿಟ್ಟನು. ಅರಮನೆಯ ಪಾಕಶಾಲೆಯಲ್ಲಿ ಅದನ್ನು ನಿಷೇಧಿಸಿದನು. ತನ್ನ ಮಕ್ಕಳಾದ ಸಂಘಮಿತ್ರ ಹಾಗೂ ಮಹೇಂದ್ರರನ್ನು ಶ್ರೀ ಲಂಕೆಗೆ ಕಳಿಸಿದನು. ಅಲ್ಲಿ ಅವರು ಬುದ್ಧನ ಶಾಂತಿ ದೂತರಾಗಿ ಹೋದರು. ಇಂದಿಗೂ ಶ್ರೀ ಲಂಕೆಯಲ್ಲಿ ತುಂಬಾ ಜನ ಬೌದ್ಧರಿದ್ದಾರೆ. ಒಂದು ಕುತೂಹಲದ ವಿಷಯ ಏನೆಂದರೆ ಬುದ್ಧ ಧ್ಯಾನ ಮಾಡುತಿದ್ದ ಬೋಧಿ (ಅರಳಿ) ಮರದಿದಿಂದ ಒಂದು ಕೊಂಬೆ ತಗೊಂಡು ಶ್ರೀ ಲಂಕೆಯಲ್ಲಿ ಮಹೇಂದ್ರ - ಸಂಘಮಿತ್ರರು ನೆಟ್ಟರು. ಆ ಮರ ಇಂದಿಗೂ ಅಲ್ಲೇ ಇದೆ.
ಇಂಥ ಒಬ್ಬ ಅಪ್ರತಿಮ ರಾಜನನ್ನು ಮೆಚ್ಚಿ ಜನ ಅವನಿಗೆ 'ದೇವನಂ ಪ್ರಿಯ' ಎಂದು ಬಿರುದ್ದು ಕೊಟ್ಟರು. ದೇವನಂ ಪ್ರಿಯ ಅಂದರೆ ದೇವರಿಗೂ ಇಷ್ಟವಾದವನು ಅಂತ.
ಏನಿರಬಹುದು ನೀತಿ?
೧. ಅಶೋಕನ ರಾಜ್ಯಕ್ಕಿಂತ ದೊಡ್ಡ ರಾಜ್ಯ ಜೇಂಗೀಸ್ಖಾನ್ದಾಗಿತ್ತು . ಅಲೆಕ್ಸಾಂಡರ್ ದಿ ಗ್ರೇಟ್ - ಅವನದು ಅಷ್ಟೇ ಅಶೋಕನ ರಾಜ್ಯಕ್ಕಿಂತದೊಡ್ಡದಾಗಿತ್ತು. ಆದರೆ ಅಶೋಕನನ್ನು ನಾವು ಒಂದು ಆದರ್ಶ ರಾಜನೆಂದು ನೋಡುತ್ತೀವಿ. ಅಲೆಕ್ಸಾಂಡರ್ ಅಥವಾ ಜೇಂಗೀಸ್ ಖಾನನ್ನು ಅಲ್ಲ. ಆದ್ದರಿಂದ ನಾವು ದುರಾಸೆಗೆ ಒಳಗಾಗದೆ ನಮಗಿರುವು ಶಕ್ತಿಯಿಂದ ಸಮಾಜಕ್ಕೆ ಒಳ್ಳೇದನ್ನು ಮಾಡುವ ಪ್ರಯತ್ನ ಮಾಡಿದರೆ ಒಳ್ಳೆಯದು.
No comments:
Post a Comment