ದಾನಶೂರ ಕರ್ಣ
ಕರ್ಣನ ಉದಾರ ಮನೋಭಾವ ತಿಳಿದಿದ್ದ ಶ್ರೀ ಕೃಷ್ಣ ಅವನಿಗೆ 'ದಾನ ಶೂರ ಕರ್ಣ' ಎಂಬ ಬಿರುದ್ದು ಕೊಟ್ಟಿದ್ದ.
ಕರ್ಣನಿಗೆ ಸಿಕ್ಕ ಬಿರುದ್ದು ತನಗೆ ಯಾಕೆ ಸಿಗಲಿಲ್ಲ ಎಂದು ದುರ್ಯೋಧನನಿಗೆ ಅರ್ಥ ಆಗಲಿಲ್ಲ. ಅವನು ಆಲೋಚಿಸಿದ - 'ಕರ್ಣನಿಗಿಂತ ನಾನು ಏನು ಕಮ್ಮಿ? ಕರ್ಣನಿಗೆ ರಾಜ್ಯ ದಾನ ಮಾಡಿದ ನಾನು ಇನ್ನೆಷ್ಟು ದೊಡ್ಡ ದಾನಿ ಆನಿಸಿಕೊಳ್ಳಬೇಡ?' .
ಒಮ್ಮೆ ಕೃಷ್ಣನನ್ನು ಭೇಟಿ ಮಾಡಿ ದುರ್ಯೋಧನ ಕೇಳಿದ ' ಕೃಷ್ಣ, ನೀನು ಕರ್ಣನಿಗೆ ದಾನಶೂರ ಎಂದು ಬಿರುದ್ದು ಕೊಟ್ಟೆ. ಆದರೆ ನಾನು ಅವನಿಗಿಂತ ಯಾವ ರೀತಿಯಲ್ಲಿ ಕಮ್ಮಿ? ನೀನೆ ಹೇಳು? ನನಗೆ ಬಿರುದ್ದು ಯಾಕೆ ಕೊಡಲಿಲ್ಲ ನೀನು?'
ಇದನ್ನು ಕೇಳಿದ ಕೃಷ್ಣ ನಗುತ್ತ ಹೇಳಿದ 'ದುರ್ಯೋಧನ, ಕಾಲ ಬಂದಾಗ ನಾನೇ ಹೇಳುತ್ತೀನಿ ಯಾಕೆ ಅಂತ. '
ಸ್ವಲ್ಪ ದಿನಗಳ ನಂತರ ಒಂದು ರಾತ್ರಿ ಜೋರು ಮಳೆ ಬರುತಿತ್ತು. ಮೂರು ನಾಲ್ಕು ದಿನಗಳಿಂದ ನಿಲ್ಲದಂಥ ಮಳೆ ಅದು. ಒಬ್ಬ ವಯ್ಯಸ್ಸಾದವನ ವೇಷ ಧರಿಸಿ ಕೃಷ್ಣ ದುರ್ಯೋಧನನ ಅರಮನೆಗೆ ಬಂದನು. 'ರಾಜ, ನನ್ನ ಮಗಳ ಮದುವೆ ನಾಳೆ ಇದೆ. ಅದಕ್ಕೆ ಹೋಮ ಮಾಡಲು ಒಣಗಿದ ಸೌದೆ ದಾನ ಮಾಡುವೆಯ?' ಎಂದ ವೃದ್ಧನ ರೂಪದಲ್ಲಿದ್ದ ಕೃಷ್ಣ. ದುರ್ಯೋಧನ ಕೂಡಲೇ ಅವನ ಸೇವಕರನ್ನು ಕರೆದು ಆ ಮುದಿ ಜೀವಕ್ಕೆ ಸೌದೆ ನೀಡಲು ಆಜ್ಞೆ ನೀಡಿದ. ಸೇವಕರು ಅವನ ಆಜ್ಞೆಯಂತೆ ಸೌದೆ ಹುಡುಕಲು ಹೊರಟರು. ಆದರೆ ಎಲ್ಲಿ ಹೋದರು ಸೌದೆ ಸಿಗಲಿಲ್ಲ, ಇದ್ದ ಸೌದೆ ಎಲ್ಲ ಮಳೆಯಲ್ಲಿ ಒದ್ದೆ ಆಗಿದ್ದವು. ಬರಿ ಕಯ್ಯಿ ಹಿಂತಿರುಗಿ ಸೌದೆ ಸಿಗಲಿಲ್ಲ ವೆಂದು ದುರ್ಯೋಧನನಿಗೆ ಹೇಳಿದರು. ಆಗ ದುರ್ಯೋಧನ ವೃದ್ಧನ ವೇಷದಲ್ಲಿದ್ದ ಕೃಷ್ಣನಿಗೆ 'ಅಯ್ಯ, ಈ ಘೋರ ಮಳೆಯಲ್ಲಿ ಸೌದೆ ಬೇಕೆಂದರೆ ಅದು ಆಗದ ಮಾತು. ನಿನಗೆ ಬೇರೆ ಏನಾದರೂ ಸಹಾಯ ಬೇಕಿದ್ದಲ್ಲಿ ಕೇಳು' ಎಂದನು. ಅದಕ್ಕೆ ಆ ವಯಸ್ಸಾದವನು ನಿರಾಶೆ ವ್ಯಕ್ತ ಪಡಿಸುತ್ತಾ 'ರಾಜ, ನಿನ್ನ ಕೈಯಲ್ಲಿ ಸೌದೆ ದಾನ ಮಾಡಲು ಆದರೆ ಮಾಡು, ಅದು ಬಿಟ್ಟು ಬೇರೆ ಏನು ಬೇಡ ನನಗೆ' ಎಂದು ಅಲ್ಲಿಂದ ಹೊರಟು ಹೋದ.
ಅಲ್ಲಿಂದ ವೃದ್ಧನ ವೇಷದಲ್ಲಿದ್ದ ಕೃಷ್ಣನು ಕರ್ಣನ ಹತ್ತಿರ ಹೋಗಿ ಅದೇ ಸೌದೆಯ ಕೋರಿಕೆ ಮುಂದಿಟ್ಟ. ಕರ್ಣ ಆಲೋಚಿಸಿದ. ಇಂಥ ಮಳೆಯಲ್ಲಿ ಒಣಗಿದ ಸೌದೆ ಸಿಗಲು ಸಾಧ್ಯ ಇಲ್ಲ ಎಂದು ತಿಳಿದ. ಅವನ ಅರಮನೆಯ ಒಂದು ಕೋಣೆಯನ್ನು ಸೇವಕರ ಕೈಯಲ್ಲಿ ಹೊಡೆಸಿ ಅದರಲ್ಲಿದ್ದ ಮರವನ್ನು ಸೌದೆಯಾಗಿ ದಾನ ನೀಡಿದ. ಕೃಷ್ಣನು ಅವನ ವೇಷ ತೆಗೆದು ಅವನ ನಿಜ ರೂಪ ತೋರಿಸಿದ. ಕರ್ಣನ ಉದಾರ ಮನೋಭಾವವನ್ನು ಕೊಂಡಾಡಿದ.
ಈ ವಿಷಯ ದುರ್ಯೋಧನನಿಗೂ ಹೇಳಿದ. 'ಈಗ ತಿಳಿಯಿತಾ, ದುರ್ಯೋಧನ ? ದಾನಶೂರ ಎಂದು ಕರೆಸಿಕೊಳ್ಳಲು ಕರ್ಣ ಮಾತ್ರ ಯಾಕೆ ಅರ್ಹ ಎಂದು ?' ದುರ್ಯೋಧನನಂಥ ದುರಹಂಕಾರಿಯೂ ಒಪ್ಪಲೇ ಬೇಕಿತ್ತು ಕೃಷ್ಣನ ತರ್ಕ.
ನೀತಿ ಏನಿರಬಹುದು?
೧. ದುರ್ಯೋಧನನ ಹತ್ತಿರ ಕರ್ಣನಿಗಿಂತ ದೊಡ್ಡ ಅರಮನೆ ಇತ್ತು. ಆದರೆ ಅವನಿಗೆಕರ್ಣನ ಸಹಾಯ ಹಾಗು ದಾನ ಮಾಡುವ ಮನಸ್ಸು ಇರಲಿಲ್ಲ. ಅದಕ್ಕೆ ದಾನ ಮಾಡಲು ಶ್ರೀಮಂತಿಕೆ ಇದ್ದಾರೆ ಸಾಲದು - ದೊಡ್ಡ ಮನಸ್ಸೇ ಮುಖ್ಯ.
೨. ಪ್ರತಿಯೊಬ್ಬರಿಗೂ ಅವರದೇ ಆದ ಒಳ್ಳೆಯ ಗುಣಗಳಿರುತ್ತದೆ. ಅಸೂಯೆಪಡುವುದರಿಂದ ಏನು ಪ್ರಯೋಜನ ಇಲ್ಲ. ಆದರೆ ಬೇರೆಯವರನ್ನು ನೋಡಿ ಕಲಿಯಬೇಕು.
No comments:
Post a Comment